About Vikrama
ರಾಷ್ಟ್ರೀಯ ಸ್ವಯಂಸೇವಕ ಸಂಘ 1925ರಲ್ಲಿ ಪ್ರಾರಂಭವಾದರೂ ಸಂಘ ಪರಿವಾರದ ವಿವಿಧ ಸಂಘಟನೆಗಳು ಆರಂಭವಾಗಿದ್ದು 1947ರ ಬಳಿಕ. ರಾಷ್ಟ್ರೀಯ ವಿಚಾರ, ಹಿಂದುತ್ವವನ್ನು ಪ್ರತಿಪಾದಿಸುವ ಪತ್ರಿಕೆಗಳು ಆಗ ತೀರಾ ವಿರಳವಾಗಿದ್ದವು. ಸಂಘದ ಬಗ್ಗೆಯಂತೂ ಒಂದು ಬಗೆಯ ತಾತ್ಸಾರ ಮನೋಭಾವವಿತ್ತು. ಇಂತಹ ಸಂದರ್ಭದಲ್ಲಿ ನಮ್ಮದೇ ಆದ ಪತ್ರಿಕೆಗಳನ್ನು ಪ್ರಾರಂಭಿಸಬೇಕೆಂಬ ಸಂಘದ ಅಖಿಲ ಭಾರತೀಯ ನಿರ್ಣಯಕ್ಕೆ ಅನುಸಾರವಾಗಿ ದೆಹಲಿಯಲ್ಲಿ ;ಆರ್ಗನೈಸರ್ ; (ಇಂಗ್ಲಿಷ್), ಪಾಂಚಜನ್ಯ (ಹಿಂದಿ) ವಾರ ಪತ್ರಿಕೆಗಳು ಆರಂಭಗೊಂಡವು. ಕರ್ನಾಟಕದಲ್ಲೂ ವಿಕ್ರಮ ಹೆಸರಿನ ವಾರಪತ್ರಿಕೆಯನ್ನು ಸಂಘ ಹೊರತಂದಿತು. ಅದರ ಮೊದಲ ಸಂಪಾದಕರಾಗಿ ಕಾರ್ಯನಿರ್ವಹಿಸಿದವರು ಶ್ರೀ ಎಂ.ವಿ.ಸೂರ್ಯನಾರಾಯಣ ಶಾಸ್ತ್ರಿ. ಕೆಲವು ಕಾಲ ಸಂಘದ ಪ್ರಚಾರಕರಾಗಿದ್ದ ಅವರು, 1948 ಫೆ. 4ರಂದು ಸಂಘದ ಮೇಲೆ ನಿಷೇಧ ಹಾಕುವವರೆಗೂ ಸಂಪಾದಕರಾಗಿದ್ದರು.ಸಂಘದ ಮೇಲೆ ನಿಷೇಧ ಬಂದಾಗ ಪತ್ರಿಕೆಯೂ ನಿಂತುಹೋಯಿತು. ಅನಂತರ ನಿಷೇಧ ಕಳೆದ ಬಳಿಕ ಮತ್ತೆ ಪತ್ರಿಕೆ ಪ್ರಾರಂಭವಾಗಿದ್ದು 1949ರಲ್ಲಿ. ವಿಕ್ರಮ ಪ್ರಕಾಶನ ಟ್ರಸ್ಟ್ ಹೆಸರಿನಲ್ಲಿ ಪುನರಾರಂಭಗೊಂಡ ಪತ್ರಿಕೆಗೆ ಸಂಪಾದಕರಾಗಿ ಹೆಗಲು ಕೊಟ್ಟವರು ಶ್ರೀ ಜಿ.ಆರ್.ಮಾಧವರಾವ್. ಚಾಮರಾಜಪೇಟೆಯ 2ನೇ ಮುಖ್ಯರಸ್ತೆಯಲ್ಲಿ ಕೇಸರಿ ಪ್ರೆಸ್ ನಲ್ಲಿ ಟೆಡ್ಲರ್ ಯಂತ್ರ ಬಳಸಿ ಪತ್ರಿಕೆ ಮುದ್ರಣವಾಗುತ್ತಿತ್ತು. ಮಾಧವ ರಾವ್ 3-4 ವರ್ಷಗಳ ಕಾಲ ಸಂಪಾದಕರಾಗಿದ್ದರು.
by K####:
Please enable content copy option