Suddi Bidugade

Suddi Bidugade Free App

Rated 3.73/5 (26) —  Free Android application by eReleGo Digi Media Pvt Ltd

Advertisements

About Suddi Bidugade

ಮೊದಲಿಗೆ ಕೇವಲ ಒಂದು ಹಾಳೆಯಲ್ಲಿ ಪ್ರಕಟವಾಗುತ್ತಿದ್ದ ಪುತ್ತೂರು ಸುದ್ದಿ ಬಿಡುಗಡೆ ಪತ್ರಿಕೆ ಇಂದು ಪ್ರತಿದಿನ ಎಂಟಕ್ಕಿಂತ ಹೆಚ್ಚು ಪುಟಗಳಿಂದ ಜನರ ಮನೆ ಬಾಗಿಲಿಗೆ ತಲುಪುತ್ತಿರುವುದು ಸಮುದಾಯ ಪತ್ರಿಕೋದ್ಯಮದಲ್ಲೊಂದು ಕ್ರಾಂತಿ.ಎಂಬಿಬಿಎಸ್ ವೈದ್ಯರೊಬ್ಬರ ಹೋರಾಟದ ಫಲವಾಗಿ ಪುತ್ತೂರಿನಲ್ಲಿ ಸುದ್ದಿಬಿಡುಗಡೆ ದಿನಪತ್ರಿಕೆಯಾಗಿ, ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ವಾರಪತ್ರಿಕೆಯಾಗಿ ಹೊರಬರುತ್ತಿದೆ. ಇವು ಕೇವಲ ತಾಲೂಕು ಮಟ್ಟದ ಪತ್ರಿಕೆ. ತಾಲೂಕು ಮತ್ತು ತಾಲೂಕಿನವರಾಗಿದ್ದು ಜಗತ್ತಿನಾದ್ಯಂತ ಇರುವ ಮಂದಿಯ ಸುದ್ದಿ, ಮಾಹಿತಿ ಪತ್ರಿಕೆಯ ವ್ಯಾಪ್ತಿ ಎನ್ನುತ್ತಾರೆ ಡಾ.ಯು.ಪಿ.ಶಿವಾನಂದ. ಆದರೆ, ಯಾವುದೇ ರಾಜ್ಯ ಮಟ್ಟದ ಪತ್ರಿಕೆಗಿಂತ ಹೆಚ್ಚಿನ ಪ್ರಸಾರವನ್ನು ಆಯಾಯ ತಾಲೂಕುಗಳಲ್ಲಿ ಹೊಂದಿದೆ ಎನ್ನುವುದು ಗಮನಾರ್ಹ.ಊರು, ಪರವೂರು, ದೇಶ ವಿದೇಶಗಳ ಸುದ್ದಿಯೊಂದಿಗೆ, ನಮ್ಮ ದಿನ ನಿತ್ಯದ ಬಳಕೆಗೆ ಬೇಕಾದ ಅತ್ಯವಶ್ಯಕ ಮಾಹಿತಿಯನ್ನು ನೀಡುತ್ತಿರುವ ಪತ್ರಿಕೆ ಇದಾಗಿದೆ. ಶಿಕ್ಷಣದಿಂದ ಹಿಡಿದು ಪ್ರವಾಸೋದ್ಯಮ, ಕೃಷಿ, ವಾಣಿಜ್ಯ ಇತ್ಯಾದಿ ಎಲ್ಲ ಕ್ಷೇತ್ರಗಳ ಮಾಹಿತಿಯನ್ನು ಜನರಿಗೆ ತಲುಪಿಸುವಲ್ಲಿ ಸುದ್ದಿ ಪ್ರಮುಖ ಪಾತ್ರ ವಹಿಸುತ್ತಿದೆ. ಯಾವುದೇ ಪ್ರದೇಶದ ಸಮಗ್ರ ಬೆಳವಣಿಗೆಯಲ್ಲಿ ‘ಮಾಹಿತಿ’ ಪ್ರಧಾನ ಪಾತ್ರ ವಹಿಸುತ್ತದೆ ಎಂಬುದು ಸುದ್ದಿ ಸಮೂಹದ ನಂಬಿಕೆ.

1985 ರಲ್ಲಿ ಸುಳ್ಯದ ಭ್ರಷ್ಟ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಂಬಿಬಿಎಸ್ ಓದಿದ ವೈದ್ಯರೊಬ್ಬರು ಗ್ರಾಹಕರ ವೇದಿಕೆಯ ಮೂಲಕ ಹಚ್ಚಿದ ಹೋರಾಟದ ಕಿಡಿ ಬಳಿಕ ಕರಪತ್ರದ ಮೂಲಕ ಜನಮೆಚ್ಚುಗೆ ಪಡೆದಾಗ ಹೋರಾಟಕ್ಕೆ ತೋರಿದ ಮುಂದಿನ ದಿಕ್ಕು ಇಂದಿನ ಸುದ್ದಿ ಪತ್ರಿಕೆ. ಅಂದು ಸುಳ್ಯದಲ್ಲಿ ತಮ್ಮ ಸ್ವಂತ ವಾಹನ ಮತ್ತು ಸ್ವಂತ ಖರ್ಚಿನಲ್ಲಿ ಹಳ್ಳಿ ಹಳ್ಳಿಗೆ ತೆರಳಿ ಜನಬೆಂಬಲ ಪಡೆದು ಡಾ. ಯು.ಪಿ ಶಿವಾನಂದ ಅವರು ಪತ್ರಿಕೆಯನ್ನು ಮುನ್ನೆಡೆಸಿದರು.

ಎರಡನೇ ಹಂತವಾಗಿ 1986 ರಲ್ಲಿ ಬೆಳ್ತಂಗಡಿಯಲ್ಲಿ ಸುದ್ದಿ ಪತ್ರಿಕೆ ಆರಂಭಿಸಿದರು. ಈ ಎರಡೂ ಕಡೆಗಳಲ್ಲಿ ವಾರ ಪತ್ರಿಕೆಯಾಗಿ ಆರಂಭವಾದ ಸುದ್ದಿ ಎರಡೂ ಕಡೆಗಳಲ್ಲಿ ಯಶಸ್ಸು ಕಂಡಿತು. ಮುಂದಿನ ಹಂತವಾಗಿ ಸೆ.4, 1987ರಲ್ಲಿ ಪುತ್ತೂರಲ್ಲಿ ಸುದ್ದಿ ದಿನ ಪತ್ರಿಕೆಯಾಗಿ ಆರಂಭಗೊಂಡಿತು. ಕಪ್ಪು ಬಿಳುಪಿನಲ್ಲಿ ಆರಂಭವಾದ ಸುದ್ದಿ ಅಂದು ಕೇವಲ ಎರಡು ಪುಟಗಳಲ್ಲಿ ಇತ್ತು. ಚಿಕ್ಕ ಕ್ರೌನ್ ಸೈಜ್ ನಲ್ಲಿ ಸ್ಥಳೀಯ ಟ್ರೆಡಲ್ ಪ್ರೆಸ್ಸಿನಲ್ಲಿ ಮುದ್ರಣಗೊಳ್ಳುತ್ತಿದ್ದ ಪತ್ರಿಕೆ ಆ ನಂತರದ ದಿನಗಳಲ್ಲಿ ತನ್ನ ಗಾತ್ರ ಹಾಗೂ ಪುಟಗಳಲ್ಲಿ ಏರಿಕೆಯನ್ನು ಕಂಡುಕೊಂಡಿತು. ಅಂದಿನ ಪತ್ರಿಕೆಯ ಬೆಲೆ ಕೇವಲ 10 ಪೈಸೆಯಾಗಿತ್ತು.

ಪುತ್ತೂರು, ಮಂಗಳೂರು, ಸುಳ್ಯ, ಬೆಳ್ತಂಗಡಿ, ಕೊಡಗು ಮತ್ತು ಬೆಂಗಳೂರಿನಲ್ಲಿ ನೂರಾರು ಮಂದಿಗೆ ಖಾಯಂ ಆದಾಯದ ಉದ್ಯೋಗ ಕಲ್ಪಿಸಿರುವ ಶಿವಾನಂದ ಅವರ ಪತ್ರಿಕೆಯ ಸಾಧನೆ ಅಧ್ಯಯನಕ್ಕೆ ಅರ್ಹವಾದ ವಿಚಾರ. ಪತ್ರಿಕೋದ್ಯಮ, ಗ್ರಾಮೀಣಾಭಿವೃದ್ಧಿ ಮತ್ತು ವಾಣಿಜ್ಯ ಆಡಳಿತದ ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕಾದ ಜನಪರ ಉದ್ಯಮ ಸುದ್ದಿಬಿಡುಗಡೆ ಮಾಧ್ಯಮ ಸಮೂಹ ಸಂಸ್ಥೆ.

ಯಾವುದೇ ರಾಜಕೀಯ ಸಂಘಟನೆ, ಸಿದ್ಧಾಂತಗಳಿಂದ ದೂರವಾಗಿದ್ದು ನಿಜಾರ್ಥದಲ್ಲಿ ಪತ್ರಿಕೆಯನ್ನು ನಿಷ್ಪಕ್ಷಪಾತವಾಗಿ ನಡೆಸಿಕೊಂಡು ಬರುತ್ತಿರುವುದು ಸುದ್ದಿ ಬಿಡುಗಡೆಯ ಇನ್ನೊಂದು ವೈಶಿಷ್ಟ್ಯ.

ಪತ್ರಿಕೆಯಲ್ಲೇನಿದೆ :

ಇಂದಿನ ಕ್ರೈಮ್, ಸೆಕ್ಸ್, ಕ್ರಿಕೆಟ್, ಕುಟುಂಬ ಕಲಹ ವೈಭವೀಕರಣ ಪತ್ರಿಕೋದ್ಯಮದಿಂದ ಸಂಪೂರ್ಣ ವಿಭಿನ್ನವಾಗಿ, ಜಾಹಿರಾತು ಆಧಾರಿತ ಸುದ್ದಿ ಪ್ರಕಟಣೆ ಮಾದರಿಯನ್ನು ಅನುಕರಿಸದೆ ವಿಭಿನ್ನವಾಗಿದೆ ಸುದ್ದಿಬಿಡುಗಡೆ. ಒಂದು ಪತ್ರಿಕೆ ಸಮೃದ್ಧವಾಗುವುದು ಆ ಪತ್ರಿಕೆಯಲ್ಲಿರುವ ಮಾಹಿತಿ ಮತ್ತು ಸುದ್ದಿಯಿಂದ. ಹಣ ಕೊಟ್ಟು ಪತ್ರಿಕೆ ಪಡೆಕೊಂಡ ಗ್ರಾಹಕನಿಗೆ ಆ ಪತ್ರಿಕೆಯಿಂದ ಒಂದಷ್ಟು ಲಾಭ ಸಿಗಬೇಕು ಆಗ ಮಾತ್ರ ಪತ್ರಿಕೆಯ ಉದ್ದೇಶ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ಸುದ್ದಿ ಪತ್ರಿಕೆಯಲ್ಲಿ ಏನಿದೆ ಎಂದು ಕೇಳುವ ಬದಲು ಏನಿಲ್ಲ ಎಂದು ಪ್ರಶ್ನಿಸುವುದು ಲೇಸು.

ಹುಟ್ಟು ಹಬ್ಬದಿಂದ ಹಿಡಿದು ಮರಣದವರೆಗೆ, ಶುಭ ವಿವಾಹ ಫೋಟೋ ಸಮೇತ ವರದಿಗಳು, ಪ್ರಶಸ್ತಿಗಳು, ವರ್ಗಾವಣೆ ಪದೋನ್ನತಿ, ನೇಮಕ, ಪದಾಧಿಕಾರಿ ಆಯ್ಕೆ, ವಾರದಲ್ಲಿ ಎಲ್ಲೆಲ್ಲಿ ಏನೇನು ಕಾರ್ಯಕ್ರಮಗಳಿವೆ ಎಂಬುದಕ್ಕೆ ಈ ದಿನದ ಕಾರ್ಯಕ್ರಮ, ಅಧಿಕಾರಿಗಳ ಮಾಹಿತಿ, ಇಲಾಖೆಯಲ್ಲಿ ದೊರೆಯುವ ಮಾಹಿತಿ ಇತ್ಯಾದಿಗಾಗಿ ಇಲಾಖಾ ಮಾಹಿತಿ, ಜನಪ್ರತಿನಿಧಿಗಳ ವಾರದ ಕಾರ್ಯಕ್ರಮ, ಜಾಗ ಮಾರಾಟ ಖರೀದಿ ಇತ್ಯಾದಿ ಮಾಹಿತಿ, ಶೈಕ್ಷಣಿಕ ಉದ್ಯೋಗ ಮಾಹಿತಿ, ಸಾಧಕರ ಸಂದರ್ಶನ, ಪರವೂರ ಸುದ್ದಿ, ಜಿಲ್ಲೆ, ದೇಶ ವಿದೇಶ ಸುದ್ದಿಗಳು, ಮಕ್ಕಳ ಚಿತ್ರಗಳು, ಶಿಕ್ಷಣ, ಸಾಹಿತ್ಯ ಸಾಪ್ತಾಹಿಕ, ಕೃಷಿ, ವ್ಯಕ್ತಿತ್ವ ವಿಕಸನ ಇತ್ಯಾದಿಗಳಿಗೆ ಸಂಬಂಧಪಟ್ಟಂತೆ ವಿವಿಧ ಅನುಭವಿ ಬರಹಗಾರರ ಲೇಖನಗಳು, ಹಾಳೆತಟ್ಟೆ ಮತ್ತು ಇತರ ಕೃಷಿ ಉತ್ಪನ್ನಗಳ ಮಾರಾಟ ಮಾಹಿತಿ, ಪಾರ್ಸೆಲ್ ಸರ್ವೀಸಸ್ ಹೀಗೆ ಇನ್ನೂ ಹತ್ತು ಹಲವು ಉಪಯುಕ್ತ ಮಾಹಿತಿಗಳನ್ನು, ಸುದ್ದಿಗಳನ್ನು ಜನರಿಗೆ ತಲುಪಿಸುವಲ್ಲಿ ಸುದ್ದಿ ಪತ್ರಿಕೆ ಪ್ರಮುಖ ಪಾತ್ರ ವಹಿಸುತ್ತಿದೆ.

ಶಾಸಕರು, ಉಪವಿಭಾಗದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಎಂದು ಕಚೇರಿಯಲ್ಲಿ ಇರುತ್ತಾರೆ, ಎಂದು ಇರುವುದಿಲ್ಲ ಎಂಬ ಮಾಹಿತಿ ನೀಡುವ ಮೂಲಕ ಸುದ್ದಿ ಗ್ರಾಮೀಣ ಪ್ರದೇಶದ ಜನರಿಗೆ ಬೇಕಾದ ಮಾಹಿತಿಯನ್ನು ನೀಡುತ್ತಿದೆ. ಇದರಿಂದ ಅನಗತ್ಯವಾಗಿ ಕಚೇರಿಗೆ ಅಲೆದಾಡುವುದು ತಪ್ಪುತ್ತದೆ.

ಪರವೂರ ಸುದ್ದಿ :

How to Download / Install

Download and install Suddi Bidugade version 0.0.4 on your Android device!
Downloaded 1,000+ times, content rating: Everyone
Android package: com.eReleGo.SuddiBidugade, download Suddi Bidugade.apk

All Application Badges

Free
downl.
Android
4.0.3+
For everyone
Android app

App History & Updates

More downloads  Suddi Bidugade reached 1 000 - 5 000 downloads

What are users saying about Suddi Bidugade

T70%
by T####:

In the year of 2006 our suddi website recognized by my friends in uttarakanda

A70%
by A####:

Waste it is showing no article.. in main page

Q70%
by Q####:

Empty app. Nothing to read other than ads

P70%
by P####:

No Article.. no news at all.. waste of download.

M70%
by M####:

Happy to see the app. All the best team suddi bidugade

P70%
by P####:

Wast app

T70%
by T####:

Supper

T70%
by T####:

it's better

T70%
by T####:

Loved it

U70%
by U####:

Jus loved it

U70%
by U####:

Loved it


Share The Word!


Rating Distribution

RATING
3.75
26 users

5

4

3

2

1